KASS SCHEME 2025 | ಕರ್ನಾಟಕ ಅರೋಗ್ಯ ಸಂಜೀವಿನಿ ಅಕ್ಟೋಬರ್ 1 ರಿಂದ ಜಾರಿ
KASS ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯದ ಪ್ರಾಮುಖ್ಯತೆ ಹೆಚ್ಚಾಗಿದೆ. ಆರೋಗ್ಯ ತೊಂದರೆಗಳು ಏಕಾಏಕಿ ಎದುರಾಗಬಹುದಾದವು. ಇಂಥ ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ನೀಡುವ ವ್ಯವಸ್ಥೆ ಇದ್ದರೆ ಮಾತ್ರ ಪ್ರಾಣ ಉಳಿಸುವ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ ವೈದ್ಯಕೀಯ ಚಿಕಿತ್ಸೆ ಎಂದರೆ ಇಂದು ಹೆಚ್ಚಿನ ಖರ್ಚು. ಈ ಹಿಂದಿನ ದಿನಗಳಲ್ಲಿ, ಸರ್ಕಾರಿ ನೌಕರರು ತಮ್ಮ ವೆಚ್ಚದಿಂದ ಚಿಕಿತ್ಸೆ ಪಡೆದು ನಂತರದ ಹಂತದಲ್ಲಿ ವಿಮೆ ಅಥವಾ ಮರುಪಾವತಿ ಮೂಲಕ ಹಣ ಹಿಂತೆಗೆದುಕೊಳ್ಳಬೇಕಾಗುತ್ತಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಹಾಗೂ ಹಣಕಾಸಿನ ಒತ್ತಡವನ್ನು ಉಂಟುಮಾಡುತ್ತಿತ್ತು.